
ಮುಂಬೈನ ಲಾಲ್‌ಬಾಗ್ ಪ್ರದೇಶದಲ್ಲಿನ ಗಣೇಶ ಪೆಂಡಲ್ ಬಳಿ ಶನಿವಾರ ಮಧ್ಯರಾತ್ರಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, 8 ವರ್ಷದ ಬಾಲಕಿ ಹಾಗೂ ಒಬ್ಬ ಮಹಿಳೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಲಾಚೌಕಿಯ ದತ್ತುರಾಮ್ ಲಾಡ್ ಮಾರ್ಗದಲ್ಲಿದ್ದ ಗಣೇಶ ಪೆಂಡಲ್‌ನ ಪ್ರವೇಶ ದ್ವಾರದ ಬಳಿ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ತಂಪು ಪಾನೀಯ ಮಾರಾಟ ಮಳಿಗೆಯಲ್ಲಿ ರಾತ್ರಿ 2.20ಕ್ಕೆ ಈ ಅವಘಡ ಸಂಭವಿಸಿದೆ.
ಘಟನೆಯಲ್ಲಿ ಗಾಯಗೊಂಡಿದ್ದ ಆರು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಹಾಗೂ ಮಹಿಳೆ ಮೃತಪಟ್ಟಿರುವುದಾಗಿ ಮಾಹಿತಿ ನೀಡಲಾಗಿದೆ.