
ಭಾರತದ ಅಧ್ಯಯನಗಳ ಪ್ರಕಾರ ಇತ್ತೀಚಿನ ದಿನಗಳಲ್ಲಿ ಸುಮಾರು 10 ರಿಂದ 15 ಪ್ರತಿಶತದಷ್ಟು ಸ್ಟ್ರೋಕ್ ಪ್ರಕರಣಗಳು 45 ವರ್ಷದೊಳಗಿನವರಲ್ಲೇ ಕಾಣಿಸಿಕೊಳ್ಳುತ್ತಿವೆ.
ಜೀವನಶೈಲಿ ಬದಲಾವಣೆಗಳು, ಒತ್ತಡ, ನಿದ್ರಾಹೀನತೆ ಮತ್ತು ವ್ಯಾಯಾಮದ ಕೊರತೆಯಿಂದಾಗಿ ರಕ್ತದೊತ್ತಡ, ಮಧುಮೇಹ ಮತ್ತು ಕೊಲೆಸ್ಟ್ರಾಲ್ ಸಮಸ್ಯೆಗಳು ಉಲ್ಬಣಗೊಂಡು ಸ್ಟ್ರೋಕ್ ಅಪಾಯವನ್ನು ಹೆಚ್ಚಿಸುತ್ತವೆ.
30 ವರ್ಷ ದಾಟಿದವರು ವರ್ಷಕ್ಕೊಮ್ಮೆ ರಕ್ತದೊತ್ತಡ, ಸಕ್ಕರೆ ಮತ್ತು ಲಿಪಿಡ್ ಪ್ರೊಫೈಲ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮಣಿಪಾಲ್ ಆಸ್ಪತ್ರೆಯ ನರರೋಗ ವಿಭಾಗದ ಸಲಹೆಗಾರ ಡಾ. ಶ್ರೀನಿವಾಸ್ ರಾಜು ಸಲಹೆ ನೀಡಿದ್ದಾರೆ.