
ಬಾಂಗ್ಲಾದೇಶದ ಮೈಮೆನ್‌ಸಿಂಗ್ ಜಿಲ್ಲೆಯ ಬೆಗುನ್‌ಬಾರಿ ಪ್ರದೇಶದಲ್ಲಿ 50 ವರ್ಷದ ಹಿಂದೂ ಜ್ಯುವೆಲ್ಲರಿ ಅಂಗಡಿ ಮಾಲೀಕ ನಿರಂಜನ್ ಚಂದ್ರ ಸೂತ್ರಧಾರ್ ಅವರ ಮೃತದೇಹ ಡ್ರಮ್‌ನಲ್ಲಿ ಪತ್ತೆಯಾಗಿದೆ.
ಸೆಪ್ಟೆಂಬರ್ 20ರಿಂದ ನಾಪತ್ತೆಯಾಗಿದ್ದ ನಿರಂಜನ್ ಅವರ ತಲೆ ಮತ್ತು ಎದೆಯ ಭಾಗದಲ್ಲಿ ತೀಕ್ಷ್ಣವಾದ ಆಯುಧದಿಂದ ಇರಿದ ಗಾಯದ ಗುರುತುಗಳಿದ್ದು, ಕೊಲೆ ಬಳಿಕ ದೇಹವನ್ನು ಡ್ರಮ್‌ನಲ್ಲಿಟ್ಟು ನೀರಿಗೆ ಎಸೆಯಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಮೃತರ ಜೇಬಿನಲ್ಲಿದ್ದ ಟೋಕನ್ ಮೂಲಕ ಗುರುತು ಪತ್ತೆಹಚ್ಚಲಾಗಿದ್ದು, ಈ ಘಟನೆಯು ಅಲ್ಪಸಂಖ್ಯಾತರ ಮೇಲಿನ ದಾಳಿಗಳ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.