ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ 3,395 ಮಿಕ್ಕುಳಿದ ವೃಂದದ ಮತ್ತು 596 ಸ್ಥಳೀಯ ವೃಂದದ ಕಾನ್ಸ್‌ಟೆಬಲ್ ಹುದ್ದೆಗಳ ಪರೀಕ್ಷೆಯನ್ನು ಆಗಸ್ಟ್ 2, 2026 ರಂದು ಒಂದೇ ದಿನ ನಡೆಸಲಾಗುತ್ತಿದೆ.
ಬೆಳಗ್ಗೆ 10:30 ರಿಂದ 12:00 ರವರೆಗೆ ಒಂದು ಪರೀಕ್ಷೆ ಮತ್ತು ಮಧ್ಯಾಹ್ನ 2:30 ರಿಂದ 4:00 ರವರೆಗೆ ಮತ್ತೊಂದು ಪರೀಕ್ಷೆ ನಿಗದಿಯಾಗಿದ್ದು, ಕೇಂದ್ರಗಳ ನಡುವಿನ ಅಂತರ 45-100 ಕಿ.ಮೀ ಇದೆ.
ಪರೀಕ್ಷಾ ಕೇಂದ್ರಗಳ ನಡುವಿನ ಅಂತರ ಮತ್ತು ಪ್ರಯಾಣದ ಸಮಯದ ಕಾರಣದಿಂದಾಗಿ ಅಭ್ಯರ್ಥಿಗಳು ಎರಡೂ ಪರೀಕ್ಷೆಗಳನ್ನು ಬರೆಯಲು ಸಾಧ್ಯವಾಗುತ್ತಿಲ್ಲ ಎಂದು ಕೆಇಎ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.