
ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ₹40,000 ಕೋಟಿಗೂ ಹೆಚ್ಚಿನ ಅನುದಾನ ಬಾಕಿ ಇದ್ದು, ಇದನ್ನು ಬಿಡುಗಡೆಗೊಳಿಸಲು ಸಂಸದರು ಶ್ರಮಿಸಬೇಕೆಂದು ಡಿಸಿಎಂ ಡಾ. ಜಿ. ಪರಮೇಶ್ವರ್ ಮನವಿ ಮಾಡಿದ್ದಾರೆ.
ಜಲಜೀವನ್ ಮಿಷನ್ ಅಡಿ ₹17,554 ಕೋಟಿ, ಭದ್ರಾ ಮೇಲ್ದಂಡೆ ಯೋಜನೆಗೆ ₹5,400 ಕೋಟಿ ಮತ್ತು 15ನೇ ಹಣಕಾಸು ಆಯೋಗದ ವಿಶೇಷ ಅನುದಾನ ₹5,495 ಕೋಟಿ ಸೇರಿದಂತೆ ಹಲವು ಬಾಕಿಗಳಿವೆ.
ರಾಜ್ಯದ 169ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಇದ್ದು, ಬೆಳೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ಬರ ಘೋಷಣೆಯ ನಿಯಮಗಳನ್ನು ಸಡಿಲಿಸುವಂತೆ ಕೇಂದ್ರಕ್ಕೆ ಒತ್ತಡ ಹೇರಲು ಸಂಸದರಿಗೆ ಸೂಚಿಸಲಾಗಿದೆ.