
ನಟಿ ಜಾನ್ಹವಿ ಮತ್ತು ಜೂ ಎನ್ಟಿಆರ್ ನಟನೆಯ ‘ದೇವರಾ’ ಸಿನಿಮಾದ ‘ಚುಟ್ಟಮಲ್ಲೇ’ ಹಾಡನ್ನು ಕೃತಕ ಬುದ್ಧಿಮತ್ತೆ ಬಳಸಿ ಅಶ್ಲೀಲವಾಗಿ ಬದಲಾಯಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು, ಇದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿರುವ ನಟ ಜೂನಿಯರ್ ಎನ್ಟಿಆರ್, ಇದು ಅತ್ಯಂತ ಅಸಹ್ಯಕರ ಮತ್ತು ನಾಚಿಕೆಗೇಡಿನ ವರ್ತನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ವಿಡಿಯೋ ಸೃಷ್ಟಿಸಿದ ಹಾಗೂ ಹಂಚಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.
ಸಾರ್ವಜನಿಕರು ಇಂತಹ ಕಂಟೆಂಟ್ ವೀಕ್ಷಿಸಬಾರದು ಅಥವಾ ಶೇರ್ ಮಾಡಬಾರದು ಎಂದು ಮನವಿ ಮಾಡಿರುವ ಎನ್ಟಿಆರ್, ಎಐ ದುರುಪಯೋಗ ತಡೆಯಲು ಕಠಿಣ ನಿಯಮಗಳನ್ನು ತರುವಂತೆ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.