
ಲಡಾಖ್ನಲ್ಲಿ 28 ಆಯಕಟ್ಟಿನ ಸ್ಥಳಗಳಿಗೆ ಭಾರತ ಸರ್ಕಾರವು ಪ್ರಮಾಣೀಕೃತ ಹೆಸರುಗಳನ್ನು ನಿಗದಿಪಡಿಸಿರುವುದನ್ನು ಚೀನಾ ತೀವ್ರವಾಗಿ ವಿರೋಧಿಸಿದೆ.
ಸರ್ವೆ ಆಫ್ ಇಂಡಿಯಾ ಅಧಿಕೃತ ಭೂಪಟದಲ್ಲಿ ಅಕ್ಟೋಬರ್ 2ರಂದು 10 ಶಿಖರಗಳು, ಜಲಾಶಯಗಳು ಹಾಗೂ ನದಿಗಳನ್ನು ಒಳಗೊಂಡಂತೆ 28 ಸ್ಥಳಗಳಿಗೆ ಹೆಸರುಗಳನ್ನು ಪ್ರಕಟಿಸಲಾಗಿದೆ.
ಲಡಾಖ್ ಕೇಂದ್ರಾಡಳಿತ ಪ್ರದೇಶವನ್ನು ಚೀನಾ ಎಂದಿಗೂ ಗುರುತಿಸಿಲ್ಲ ಮತ್ತು ಭಾರತದ ಈ ಹೆಜ್ಜೆ ಕಾನೂನುಬಾಹಿರ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೋ ನಿಂಗ್ ತಿಳಿಸಿದ್ದಾರೆ.