
ಕೊಯಮತ್ತೂರಿನ ಕಾರಿ ಮೋಟಾರ್ ಸ್ಪೀಡ್ವೇಯಲ್ಲಿ ನಡೆದ ಜೆಕೆ ಟೈರ್ ಪ್ರಾಯೋಜಿತ ಎಫ್4 ಭಾರತೀಯ ಚಾಂಪಿಯನ್ಶಿಪ್ನ ಮೊದಲ ಸುತ್ತಿನಲ್ಲಿ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡದ ಅರಿಸ್ ಕಿರಿಯಾಕೌ 51 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ.
ಮೂರು ರೋಚಕ ಓಟಗಳಲ್ಲಿ ಕಿರಿಯಾಕೌ ಎರಡು ಬಾರಿ ದ್ವಿತೀಯ ಸ್ಥಾನ ಹಾಗೂ ಮೂರನೇ ಓಟದಲ್ಲಿ ಗೆಲುವು ಸಾಧಿಸುವ ಮೂಲಕ ಗಮನಾರ್ಹ ಪ್ರದರ್ಶನ ನೀಡಿದರು.
ಮೊದಲ ಸುತ್ತಿನ ಅಂತ್ಯಕ್ಕೆ ಲುವಿವೆ ಸಂಬುದ್ಲಾ 38 ಅಂಕಗಳೊಂದಿಗೆ ಎರಡನೇ ಹಾಗೂ ಆರನ್ ಮೆಹ್ತಾ 32 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.