
ಫ್ಲೈದುಬೈ ವಿಮಾನದ ಕಾಕ್‌ಪಿಟ್‌ನಲ್ಲಿ ಸಾಹಸ ಮೆರೆದು 174 ಜನರ ಪ್ರಾಣ ರಕ್ಷಿಸಿದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರಿಗೆ ಅಶೋಕ ಚಕ್ರ ನೀಡಬೇಕೆಂದು ದೇಶಾದ್ಯಂತ ಒತ್ತಾಯ ಕೇಳಿಬಂದಿದೆ.
ಶಿವಸೇನಾ ಸಂಸದ ಮಿಲಿಂದ್ ಡಿಯೋರ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಈ ಕುರಿತು ಮನವಿ ಮಾಡಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಸ್ಮಿತ್ ಮಚ್ಚರ್ ಅವರಿಗೆ ರಾಜ್ಯದ ವಿಶಿಷ್ಟ ಗುಜರಾತ್ ಗರಿಮಾ ಪ್ರಶಸ್ತಿ ಘೋಷಿಸಿದ್ದಾರೆ.