
ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ರಾಜತಾಂತ್ರಿಕ ಗಡಿ ಮೀರಿ ಕಠಿಣ ಹಾಗೂ ನೇರ ಮಿಲಿಟರಿ ಕ್ರಮಗಳ ಮೂಲಕ ಹೊಸ ಇತಿಹಾಸ ಸೃಷ್ಟಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಗೃಹ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2004-2014ರ ಅವಧಿಯಲ್ಲಿದ್ದ 7,217 ಉಗ್ರ ದಾಳಿ ಘಟನೆಗಳು 2014-2024ರಲ್ಲಿ 2,242ಕ್ಕೆ ಇಳಿದಿದ್ದು, ಒಟ್ಟು ಸಾವುನೋವುಗಳಲ್ಲಿ ಶೇ. 70ರಷ್ಟು ಇಳಿಕೆಯಾಗಿದೆ.
ದಾಳಿಗಳನ್ನು ಸಹಿಸಿಕೊಳ್ಳುವ ಬದಲಾಗಿ ಪ್ರತ್ಯುತ್ತರ ನೀಡಿ ನಿರೋಧಕ ಶಕ್ತಿ ಸೃಷ್ಟಿಸುವ ಹಾದಿಗೆ ಭಾರತ ಬದಲಾಗಿದ್ದು, ಇನ್ನು ಮುಂದೆ ಭಾರತವೇ ದಾಳಿಯ ನಿಯಮಗಳನ್ನು ನಿರ್ಧರಿಸಲಿದೆ.