
ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿರುವ ತಿಪ್ಪಣ್ಣ ಮತ್ತು ಪ್ರೇಮಾ ದಂಪತಿ, ದಶಕಗಳಿಂದ ಬಡ ವಿದ್ಯಾರ್ಥಿಗಳಿಗೆ ಕೇವಲ 10 ರೂಪಾಯಿಗೆ ಹೊಟ್ಟೆ ತುಂಬಾ ಉಪಹಾರ ನೀಡುತ್ತಿದ್ದಾರೆ.
ಶಿಕ್ಷಣದಿಂದ ವಂಚಿತರಾದ ನೋವನ್ನು ಅನುಭವಿಸಿರುವ ಈ ದಂಪತಿ, ಹಣದ ಕೊರತೆಯಿಂದ ವಿದ್ಯಾರ್ಥಿಗಳ ಶಿಕ್ಷಣ ಅರ್ಧಕ್ಕೆ ನಿಲ್ಲಬಾರದು ಎಂಬ ಉದ್ದೇಶದಿಂದ ಈ ನಿಸ್ವಾರ್ಥ ಸೇವೆಯನ್ನು ಮುಂದುವರಿಸಿದ್ದಾರೆ.
ಇಲ್ಲಿ ಇಡ್ಲಿ, ದೋಸೆ, ಪಡ್ಡು ಮತ್ತು ರೈಸ್ ಬಾತ್ನಂತಹ ರುಚಿಕರವಾದ ತಿಂಡಿಗಳು ಸಿಗುತ್ತಿದ್ದು, ಈ ಹೋಟೆಲ್ನಲ್ಲಿ ಉಂಡು ಓದಿದ ಅನೇಕರು ಇಂದು ದೊಡ್ಡ ಹುದ್ದೆಗಳಲ್ಲಿದ್ದಾರೆ.