
ಮನೆಗಳ ಅಡಿಯಲ್ಲಿ ಅಪಾರ ಪ್ರಮಾಣದ ಪ್ರಾಚೀನ ಚಿನ್ನದ ನಿಧಿಯಿದೆ ಎಂದು ನಂಬಿಸಿ ವಂಚಕರ ಜಾಲವೊಂದು ಹೈದರಾಬಾದ್ನಲ್ಲಿ 11 ಜನರಿಂದ ಬರೋಬ್ಬರಿ 1 ಕೋಟಿ ರೂಪಾಯಿ ಹಣವನ್ನು ದೋಚಿದೆ.
ಕೆಲವು ಸ್ಥಳಗಳಲ್ಲಿ ಗುಂಡಿಗಳನ್ನು ತೋಡಿ, ಮುಂಚಿತವಾಗಿಯೇ ಇಟ್ಟಿದ್ದ ಚಿನ್ನದ ಲೇಪನದ ನಕಲಿ ನಾಣ್ಯಗಳನ್ನು ತೋರಿಸಿ, ಪೂಜೆ-ಪುನಸ್ಕಾರಗಳ ನೆಪದಲ್ಲಿ ವಂಚಕರು ಈ ಹಣವನ್ನು ವಸೂಲಿ ಮಾಡಿದ್ದರು.
ನಾಣ್ಯಗಳು ನಕಲಿ ಎಂದು ತಿಳಿದ ನಂತರ ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.