
ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಜನ್ಮದಿನ ಹಾಗೂ ಸಾರ್ವಜನಿಕ ಜೀವನದ 25ನೇ ವರ್ಷದ ನೆನಪಿಗಾಗಿ ಉಜ್ಜಯಿನಿಯಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಉಜ್ಜಯಿನಿಯ ಶಿಪ್ರಾ ನದಿಯ ರಾಮ್ ಘಾಟ್ ಪ್ರದೇಶದಲ್ಲಿ ಕಲಾ ವಿದ್ಯಾರ್ಥಿಗಳು ಮತ್ತು ಸ್ವಯಂಸೇವಕರು ಲಕ್ಷಾಂತರ ದೀಪಗಳನ್ನು ಬಳಸಿ ಬೃಹತ್ ಮುಖಚಿತ್ರ ರಚಿಸಿದ್ದಾರೆ.
'ಸೇವಾ ಸಂಕಲ್ಪ ಅಭಿಯಾನ'ದ ಭಾಗವಾಗಿ ಆಯೋಜಿಸಲಾಗಿದ್ದ ಈ ದೀಪೋತ್ಸವದಲ್ಲಿ ನದಿ ದಂಡೆಯ ಮೇಲೆ ದೀಪಗಳಿಂದ ಪ್ರಧಾನಿ ಮೋದಿಯವರ ಭಾವಚಿತ್ರವನ್ನು ಬಿಡಿಸಲಾಗಿದೆ.