
ಕೊಲಂಬೋದ ಎಸ್ಎಸ್ಸಿ ಮೈದಾನದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಐದನೇ ದಿನದ ಭೋಜನ ವಿರಾಮದ ವೇಳೆಗೆ ಶ್ರೀಲಂಕಾ ತಂಡ 116 ರನ್ಗಳ ಮುನ್ನಡೆ ಸಾಧಿಸಿ ಪಂದ್ಯವನ್ನು ರೋಚಕ ಘಟ್ಟಕ್ಕೆ ಕೊಂಡೊಯ್ದಿದೆ.
ಶ್ರೀಲಂಕಾದ ಸೋನಲ್ ದಿನುಷಾ ಅರ್ಧಶತಕ ಮತ್ತು ಕೇಶರ ನುವಾಂತ ಅವರ ಜವಾಬ್ದಾರಿಯುತ ಬ್ಯಾಟಿಂಗ್ನಿಂದಾಗಿ ಲಂಕಾ ತಂಡ ದ್ವಿತೀಯ ಇನ್ನಿಂಗ್ಸ್ನಲ್ಲಿ 320ಕ್ಕೂ ಅಧಿಕ ರನ್ ಗಳಿಸಿ ಭಾರತಕ್ಕೆ ಸವಾಲೊಡ್ಡಿದೆ.
ಸರಣಿಯಲ್ಲಿ 1-0 ಮುನ್ನಡೆ ಹೊಂದಿರುವ ಭಾರತ ತಂಡ ಪಂದ್ಯ ಗೆಲ್ಲಲು ಇನ್ನುಳಿದ 2 ಸೆಷನ್ಗಳಲ್ಲಿ 4 ವಿಕೆಟ್ಗಳನ್ನು ಕಬಳಿಸಿ, ನಂತರ ಗುರಿಯನ್ನು ಬೆನ್ನಟ್ಟಬೇಕಾದ ಅನಿವಾರ್ಯತೆ ಎದುರಾಗಿದೆ.