
ಬಿಸಿಸಿಐ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾ ಜಂಟಿಯಾಗಿ ಅಂಪೈರ್ ವಿನಿಮಯ ಕಾರ್ಯಕ್ರಮ ಆರಂಭಿಸಿದ್ದು, ರಣಜಿ ಟ್ರೋಫಿಯಲ್ಲಿ ಆಸ್ಟ್ರೇಲಿಯಾದ ಅಂಪೈರ್ಗಳು ಕಾರ್ಯನಿರ್ವಹಿಸಲಿದ್ದಾರೆ.
ಅಕ್ಟೋಬರ್ 18ರಂದು ದೆಹಲಿ ಮತ್ತು ಗುಜರಾತ್ ನಡುವಿನ ರಣಜಿ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬೆನ್ ಟ್ರೆಲೋರ್ ಅಂಪೈರಿಂಗ್ ಮಾಡುತ್ತಿದ್ದು, ಅಕ್ಟೋಬರ್ 26ರ ಮುಂಬೈ-ಹರಿಯಾಣ ಪಂದ್ಯದಲ್ಲೂ ಮುಂದುವರಿಯಲಿದ್ದಾರೆ.
ಭಾರತದ ಅಂಪೈರ್ ಪರಾಶರ್ ಜೋಶಿ ಆಸ್ಟ್ರೇಲಿಯಾಕ್ಕೆ ತೆರಳಿ ಶೆಫೀಲ್ಡ್ ಶೀಲ್ಡ್ ಮತ್ತು ಏಕದಿನ ಕಪ್ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಲಿದ್ದಾರೆ.