
ಸ್ಪೈಡರ್ ಮ್ಯಾನ್ ಸರಣಿಯ ಒಂಬತ್ತನೇ ಚಿತ್ರವಾದ 'ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ' ಜುಲೈ 30ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ.
ಈ ಸಿನಿಮಾ ಬಿಡುಗಡೆಗೂ ಮುನ್ನವೇ ಅಡ್ವಾನ್ಸ್ ಬುಕಿಂಗ್ ಮೂಲಕ 35 ಕೋಟಿ ರೂಪಾಯಿ ಗಳಿಕೆ ಮಾಡಿದ್ದು, ಮೊದಲ ದಿನ 50 ರಿಂದ 60 ಕೋಟಿ ರೂಪಾಯಿ ಗಳಿಸುವ ನಿರೀಕ್ಷೆಯಿದೆ.
ಟಾಮ್ ಹಾಲೆಂಡ್ ನಟಿಸುತ್ತಿರುವ ನಾಲ್ಕನೇ ಸ್ಪೈಡರ್ ಮ್ಯಾನ್ ಚಿತ್ರ ಇದಾಗಿದ್ದು, ಜಗತ್ತು ಪೀಟರ್ ಪಾರ್ಕರ್ ಅನ್ನು ಮರೆತ ನಂತರದ ಕಥೆಯನ್ನು ಇದು ಒಳಗೊಂಡಿದೆ.