
ಒಂದೂವರೆ ದಶಕ ಕಳೆದರೂ ಪೂರ್ಣಗೊಳ್ಳದ 470 ಕಿಲೋಮೀಟರ್ ಗೋವಾ-ಮುಂಬೈ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಯೋಜನೆಯ ಕಾಮಗಾರಿ ವಿಳಂಬಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯೋಜನೆ ವಿಳಂಬವಾಗಿರುವ ಕಾರಣ ಉದ್ಘಾಟನಾ ಕಾರ್ಯಕ್ರಮಕ್ಕೆ ತಾನು ಬರುವುದಿಲ್ಲ ಎಂದು ಗಡ್ಕರಿ ಖಡಕ್ ನಿರ್ಧಾರ ಕೈಗೊಂಡಿದ್ದು, ಗುತ್ತಿಗೆದಾರ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸುವುದಾಗಿ ಎಚ್ಚರಿಸಿದ್ದಾರೆ.
ಈ ಯೋಜನೆ ಪೂರ್ಣಗೊಂಡರೆ ಮುಂಬೈ-ಗೋವಾ ನಡುವಿನ ಸಂಚಾರ ಸಮಯವು 13 ಗಂಟೆಯಿಂದ 6 ಗಂಟೆಗೆ ಇಳಿಕೆಯಾಗಲಿದ್ದು, ಕರ್ನಾಟಕದ ಕರಾವಳಿ ಭಾಗಕ್ಕೂ ಸಂಪರ್ಕ ಸುಧಾರಿಸಲಿದೆ.