
ಬಳಸಿದ ಅಡುಗೆ ಎಣ್ಣೆಯ ಮರುಬಳಕೆ ಹಾಗೂ ಮಾರಾಟಕ್ಕೆ ಕಡಿವಾಣ ಹಾಕಲು ಆರೋಗ್ಯ ಇಲಾಖೆಯು ಕಸ ಸಂಗ್ರಹ ಮಾದರಿಯಲ್ಲೇ ಮನೆ ಮನೆಗೆ ತೆರಳಿ ಎಣ್ಣೆ ಸಂಗ್ರಹಿಸುವ ಹೊಸ ಯೋಜನೆ ರೂಪಿಸುತ್ತಿದೆ.
ಕರ್ನಾಟಕ ಜೈವಿಕ ಇಂಧನ ಅಭಿವೃದ್ಧಿ ಸಂಸ್ಥೆಯೊಂದಿಗೆ ಸಭೆ ನಡೆಸಿರುವ ಇಲಾಖೆಯು, ಒಂದು ಲೀಟರ್ ಎಣ್ಣೆ ಇದ್ದರೂ ಸಂಗ್ರಹಿಸಲು ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸುವುದರ ಜತೆಗೆ ಪ್ರತಿ ಲೀಟರ್ಗೆ ದರ ನಿಗದಿಪಡಿಸಲು ಮುಂದಾಗಿದೆ.
ಈ ಪ್ರಾಯೋಗಿಕ ಯೋಜನೆಯು ಬೆಂಗಳೂರು ಮತ್ತು ಮಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಜಾರಿಗೆ ಬರಲಿದ್ದು, ಸಂಗ್ರಹಿಸಿದ ಎಣ್ಣೆಯನ್ನು ಬಯೋಫ್ಯುಯೆಲ್ ಕಂಪನಿಗಳಿಗೆ ಹಸ್ತಾಂತರಿಸಲಾಗುತ್ತದೆ.