
ನೀಮ್ ಕರೋಲಿ ಬಾಬಾ ಅವರ ಜೀವನ ಆಧಾರಿತ ಬಾಲಿವುಡ್‌ನ ಬ್ಲಾಕ್‌ಬಸ್ಟರ್ 'ಹನುಮಾನ್ ಅಂಶ್' ಸಿನಿಮಾ ಈಗಾಗಲೇ 153 ಕೋಟಿ ರೂಪಾಯಿ ಗಳಿಸಿದ್ದು, ತೆಲುಗು ಭಾಷೆಗೆ ಕಾಲಿಡುತ್ತಿದೆ.
ಈ ಚಿತ್ರವು ಸೆಪ್ಟೆಂಬರ್ 18ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದ್ದು, ಟಾಲಿವುಡ್ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಈ ಡಬ್ಬಿಂಗ್ ಆವೃತ್ತಿಯನ್ನು ಅರ್ಪಿಸುತ್ತಿದ್ದಾರೆ.
ಫಾರ್ಚೂನ್ ಫೋರ್ ಸಿನೆಮಾಸ್ ಸಂಸ್ಥೆಯು ಚಿತ್ರದ ವಿತರಣಾ ಹಕ್ಕನ್ನು ಪಡೆದುಕೊಂಡಿದ್ದು, ದಕ್ಷಿಣ ಭಾರತದಲ್ಲೂ ಸಿನಿಮಾ ದೊಡ್ಡ ಯಶಸ್ಸು ಗಳಿಸುವ ನಿರೀಕ್ಷೆಯಿದೆ.