Indian Politics
ಧಾರವಾಡ: ಕಾರು-ಟ್ರಕ್ ಮುಖಾಮುಖಿ ಡಿಕ್ಕಿ, ನಾಲ್ವರು ಸಾವು

ಧಾರವಾಡ: ಕಾರು-ಟ್ರಕ್ ಮುಖಾಮುಖಿ ಡಿಕ್ಕಿ, ನಾಲ್ವರು ಸಾವು

prajavani1h
THE BRIEF
1

ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಅಮರಗೋಳ ಕ್ರಾಸ್ ಬಳಿ ಎನ್‌ಎಚ್‌52 ರಸ್ತೆಯಲ್ಲಿ ಕಾರು ಮತ್ತು ಟ್ರಕ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಅಪಘಾತ ಸಂಭವಿಸಿದೆ.

2

ಈ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ರಾಕೇಶ್‌ ಅನಿಲ್‌ಬೋಸ್ಲೆ, ಸಂದೀಪ ಗಣಪತಿ ಶಿಂಧೆ, ಚಾಲಕ ಅಜಿತಪ್ರಭು ಅಲ್ಲಾಪುರ ಹಾಗೂ ಶ್ರುತಿ ನವೀನ್‌ಕುಮಾರ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

3

ವಿಜಯಪುರ ಕಡೆಗೆ ಹೊರಟಿದ್ದ ಕಾರು ಹಾಗೂ ಹುಬ್ಬಳ್ಳಿ ಕಡೆಗೆ ಸಂಚರಿಸುತ್ತಿದ್ದ ಟ್ರಕ್ ನಡುವೆ ಈ ಅಪಘಾತ ನಡೆದಿದೆ ಎಂದು ನವಲಗುಂದ ಠಾಣೆ ಪೊಲೀಸರು ತಿಳಿಸಿದ್ದಾರೆ.