
ನಟ ಶಿವರಾಜ್‌ಕುಮಾರ್ ಚಿತ್ರದುರ್ಗದಲ್ಲಿ ಖಾಸಗಿ ಶೋರೂಮ್ ಉದ್ಘಾಟನೆಗೆ ಆಗಮಿಸಿದ್ದ ವೇಳೆ ಪಟಾಕಿ ಸ್ಫೋಟಗೊಂಡಿದೆ.
ಅಭಿಮಾನಿಗಳು ಹಾಗೂ ಸಂಘಟಕರು ಸಿಡಿಸಿದ ಪಟಾಕಿ ಶಿವಣ್ಣ ಅವರ ಸಮೀಪದಲ್ಲೇ ಸ್ಫೋಟಗೊಂಡ ಪರಿಣಾಮ ಅವರು ಆಘಾತಕ್ಕೊಳಗಾಗಿದ್ದಾರೆ.
ಅದೃಷ್ಟವಶಾತ್ ಯಾವುದೇ ಗಾಯಗಳಾಗದೆ ಶಿವಣ್ಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ.