
ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಬೆಂಗಳೂರಿನ ವಿವೇಕನಗರ ಹಾಕಿ ಕ್ಲಬ್ ಮೇಲೆ ದಾಳಿ ನಡೆಸಿದ್ದು, ಅಡುಗೆ ಮನೆಯಲ್ಲಿ ಜಿರಳೆಗಳ ಹಾವಳಿ ಮತ್ತು ತೀವ್ರ ಅಸ್ವಚ್ಛತೆ ಪತ್ತೆಯಾಗಿದೆ.
ತಪಾಸಣೆ ವೇಳೆ ಮಾಂಸಾಹಾರಿ ಪದಾರ್ಥಗಳ ಜೊತೆ ಐಸ್ಕ್ರೀಂ ಸಂಗ್ರಹಿಸಿರುವುದು ಮತ್ತು ಕೊಳೆತ ತರಕಾರಿಗಳನ್ನು ಬಳಸುವುದು ಕಂಡುಬಂದಿದ್ದು, 40 ಅವಧಿ ಮೀರಿದ ತಂಪು ಪಾನೀಯ ಬಾಟಲಿಗಳನ್ನು ಜಪ್ತಿ ಮಾಡಲಾಗಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಮಗಳು 2011ರ ಅಡಿಯಲ್ಲಿ ಕ್ಲಬ್ ಆಡಳಿತ ಮಂಡಳಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.