
ನೈಸ್ ಸಂಸ್ಥೆಯು ಯೋಜನೆಯನ್ನು ಪೂರ್ಣಗೊಳಿಸದೆ ₹4,756.48 ಕೋಟಿ ಟೋಲ್ ಹಣವನ್ನು ಅಕ್ರಮವಾಗಿ ಸುಲಿಗೆ ಮಾಡಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಈ ಅಕ್ರಮ ಟೋಲ್ ಸಂಗ್ರಹವು 2008-2009ರಲ್ಲಿ ವರ್ಷಕ್ಕೆ ₹5.59 ಕೋಟಿ ಇದ್ದು, 2024-2025ರ ವೇಳೆಗೆ ವರ್ಷಕ್ಕೆ ₹734.92 ಕೋಟಿಗೆ ತಲುಪಿದೆ ಎಂದು ದಾಖಲೆ ಬಿಡುಗಡೆ ಮಾಡಿದ್ದಾರೆ.
ಹೈಕೋರ್ಟ್ ತೀರ್ಪಿನ ವಿರುದ್ಧ ನೈಸ್ ಸಂಸ್ಥೆ ಸಲ್ಲಿಸಿದ ವಿಶೇಷೃತ ಅರ್ಜಿಗೆ ಸುಪ್ರೀಂ ಕೋರ್ಟ್ ಯಾವುದೇ ತಡೆ ನೀಡದೆ ನವೆಂಬರ್ 2ಕ್ಕೆ ವಿಚಾರಣೆ ಮುಂದೂಡಿದೆ ಎಂದಿದ್ದಾರೆ.