
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಸೌತ್ ರುಚೀಸ್ ಹೋಟೆಲ್ ಮೇಲೆ ಆಹಾರ ಮತ್ತು ಔಷಧ ಆಡಳಿತ ಅಧಿಕಾರಿಗಳು ದಾಳಿ ನಡೆಸಿ ಅಡುಗೆಮನೆಯನ್ನು ಸೀಜ್ ಮಾಡಿದ್ದಾರೆ.
ದಾಳಿಯ ವೇಳೆ ಅಡುಗೆಮನೆಯಲ್ಲಿ ಜಿರಳೆಗಳ ಓಡಾಟ ಮತ್ತು ಅಸ್ವಚ್ಛತೆ ಕಂಡುಬಂದಿದ್ದು, ಅವಧಿ ಮೀರಿದ ಕೊಬ್ಬರಿ ಪುಡಿ, ಸಾಂಬಾರ್ ಪುಡಿ ಮತ್ತು ಮಶ್ರೂಮ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗ್ರಾಹಕರ ಆರೋಗ್ಯಕ್ಕೆ ಅಪಾಯ ತರುತ್ತಿರುವ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕ ಪ್ರದೀಪ್ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.