
ಹಾಸನ ಜಿಲ್ಲೆಯಲ್ಲಿ ಭೀಕರ ಬರಗಾಲ ಆವರಿಸಿದ್ದರೂ, ಎತ್ತಿನಹೊಳೆ ಯೋಜನೆಯಿಂದಾಗಿ ಬೇಲೂರು ತಾಲ್ಲೂಕಿನ ಹಳೆಬೀಡು ಹೋಬಳಿಯ 20ಕ್ಕೂ ಹೆಚ್ಚು ಕೆರೆಗಳು ತುಂಬಿ ತುಳುಕುತ್ತಿವೆ.
ಪಶ್ಚಿಮಘಟ್ಟದಲ್ಲಿ ಸುರಿಯುವ ಮಳೆನೀರು ಬಯಲುಸೀಮೆಯ ಕಡೆಗೆ ಹರಿದುಬರುತ್ತಿರುವುದರಿಂದ ಐತಿಹಾಸಿಕ ದ್ವಾರಸಮುದ್ರ ಕೆರೆ ಸೇರಿದಂತೆ ಹತ್ತಾರು ಕೆರೆಗಳು ಭರ್ತಿಯಾಗಿವೆ.
ಸುಮಾರು ₹24,000 ಕೋಟಿ ವೆಚ್ಚದ ಈ ಯೋಜನೆಯು 24 ಟಿಎಂಸಿ ನೀರನ್ನು ಬಳಸಿಕೊಂಡು ಕುಡಿಯುವ ನೀರು ಒದಗಿಸುವ ಗುರಿ ಹೊಂದಿದೆ.