
ವಾರ್ಷಿಕ 50 ಲಕ್ಷ ರೂ. ವೇತನ ಪಡೆಯುವ ಟೆಕ್ಕಿ ಅನ್ಮೋಲ್ ಅಗರ್ವಾಲ್, ತೆರಿಗೆ ಕಡಿತದ ನಂತರ ಕೈಗೆ ಸಿಗುವ 3 ಲಕ್ಷ ರೂ. ಮಾಸಿಕ ಆದಾಯ ಬೆಂಗಳೂರಿನಲ್ಲಿ ಸಾಲುತ್ತಿಲ್ಲ ಎಂದು ಹೇಳಿದ್ದಾರೆ.
ಮನೆಯ ಬಾಡಿಗೆ, ನಿರ್ವಹಣೆ, ಜಿಮ್ ಮತ್ತು ಪ್ರಯಾಣಕ್ಕೆ ತಿಂಗಳಿಗೆ 1.2 ಲಕ್ಷದಿಂದ 1.3 ಲಕ್ಷ ರೂ. ಖರ್ಚಾಗುತ್ತಿದ್ದು, ಹೂಡಿಕೆಗೆ ಕೇವಲ 1 ಲಕ್ಷ ರೂ. ಉಳಿಯುತ್ತದೆ ಎಂದು ಲೆಕ್ಕಾಚಾರ ನೀಡಿದ್ದಾರೆ.
ಬೆಂಗಳೂರಿನಲ್ಲಿ 3 ಕೋಟಿ ರೂ. ಬೆಲೆಯ ಮನೆ ಮುಂದಿನ ದಿನಗಳಲ್ಲಿ 6-7 ಕೋಟಿ ರೂ.ಗೆ ಏರಬಹುದು ಎಂದು ಅಂದಾಜಿಸಿ, ಕಡಿಮೆ ವೆಚ್ಚದ ನಗರಗಳಲ್ಲಿ ವಾಸಿಸಲು ಸಲಹೆ ನೀಡಿದ್ದಾರೆ.