
ಹಿರಿಯ ನಟ ಅನಂತ್ ನಾಗ್ ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿದ್ದು, ಅವರು ಟಿವಿ9 ಜತೆ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
ರಂಗಭೂಮಿಯಿಂದ ಬಂದ ತಮಗೆ ಈ ಗೌರವ ಸಿಕ್ಕಿರುವುದು ವಿಶೇಷ ಅನುಭವ ತಂದಿದೆ ಎಂದು ತಿಳಿಸಿರುವ ಅವರು, ತಮ್ಮ ಆರಂಭದ ದಿನಗಳಲ್ಲಿ 50ಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿ ಟಿಕೆಟ್ ಮಾರಾಟಕ್ಕೂ ಹೋಗಿದ್ದನ್ನು ಸ್ಮರಿಸಿದರು.
ಡಾ. ರಾಜ್ಕುಮಾರ್ ಅವರ ಹಾದಿಯಲ್ಲಿ ಹೆಜ್ಜೆಹಾಕಿರುವುದಾಗಿ ತಿಳಿಸಿದ ಅವರು, ತಮ್ಮ ಕಲಾ ಪಯಣದಲ್ಲಿ ಸಾಹಿತಿಗಳ ಸಹವಾಸ ಮತ್ತು ಸಾರ್ವಜನಿಕರಿಗೆ ಒಳ್ಳೆಯದನ್ನು ನೀಡುವ ಪ್ರಜ್ಞೆ ಇದ್ದುದಾಗಿ ಹೇಳಿದರು.