Education
ಮೈಸೂರು: ವಿಜ್ಞಾನ ಆ್ಯಕ್ಟಿವಿಟಿ ಮಾಡದ ವಿದ್ಯಾರ್ಥಿಯ ಮೇಲೆ ಶಿಕ್ಷಕನ ಹಲ್ಲೆ

ಮೈಸೂರು: ವಿಜ್ಞಾನ ಆ್ಯಕ್ಟಿವಿಟಿ ಮಾಡದ ವಿದ್ಯಾರ್ಥಿಯ ಮೇಲೆ ಶಿಕ್ಷಕನ ಹಲ್ಲೆ

tv9kannada1h
THE BRIEF
1

ಮೈಸೂರಿನ ಖಾಸಗಿ ಶಾಲೆಯೊಂದರಲ್ಲಿ ವಿಜ್ಞಾನದ ಆ್ಯಕ್ಟಿವಿಟಿ ಮಾಡಿಲ್ಲ ಎಂಬ ಕಾರಣಕ್ಕೆ ಶಿಕ್ಷಕ ಸುರೇಶ್ ಅವರು 10ನೇ ತರಗತಿಯ ರೆಹಾನ್ ಶರೀಫ್ ಎಂಬ ವಿದ್ಯಾರ್ಥಿಯ ಕಣ್ಣಿಗೆ ಮುಷ್ಟಿಯಿಂದ ಹಲ್ಲೆ ನಡೆಸಿದ್ದಾರೆ.

2

ಹಲ್ಲೆಯಿಂದ ವಿದ್ಯಾರ್ಥಿಯ ಕಣ್ಣಿನಲ್ಲಿ ರಕ್ತ ಹೆಪ್ಪುಗಟ್ಟಿದ್ದು, ಘಟನೆಯನ್ನು ಯಾರಿಗಾದರೂ ಹೇಳಿದರೆ ಶಾಲೆಯಿಂದ ಟಿಸಿ ನೀಡಿ ಹೊರಹಾಕುವುದಾಗಿ ಶಿಕ್ಷಕ ಬೆದರಿಕೆ ಹಾಕಿದ್ದರು.

3

ವಿದ್ಯಾರ್ಥಿಯ ತಂದೆ ನೀಡಿದ ದೂರಿನ ಮೇರೆಗೆ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.