
ಏಪ್ರಿಲ್ 2025ರಲ್ಲಿ ಆಡಿಟ್ ಮ್ಯಾನೇಜರ್ ಆಗಿ ಸೇರಿದ್ದ ಮಹಿಳೆಯನ್ನು, ಪ್ರೊಬೇಷನರಿ ಅವಧಿ ಮುಗಿಯುತ್ತಿದ್ದಂತೆ ಕಾರ್ಯಕ್ಷಮತೆ ಸರಿ ಇಲ್ಲ ಎಂದು ಕಂಪನಿ ವಜಾಗೊಳಿಸಿತ್ತು.
ಕಂಪನಿಯು ನಿಗದಿಪಡಿಸಿದ 80% ಅಂಕ ಮತ್ತು 3 ರೇಟಿಂಗ್ ಪಡೆಯುವ ನಿಯಮದ ಬಗ್ಗೆ ತಮಗೆ ಮಾಹಿತಿ ಇರಲಿಲ್ಲ ಎಂದು ಮಹಿಳೆ ನ್ಯಾಯಮಂಡಳಿಯಲ್ಲಿ ವಾದಿಸಿದ್ದರು.
ಆರೋಪಗಳಿಗೆ ಯಾವುದೇ ಸಾಕ್ಷ್ಯಗಳಿಲ್ಲದ ಕಾರಣ ಕಂಪನಿಯು ಅನ್ಯಾಯವಾಗಿ ವಜಾಗೊಳಿಸಿದೆ ಎಂದು ತೀರ್ಪು ನೀಡಿದ ನ್ಯಾಯಮಂಡಳಿ, ಮಹಿಳೆಗೆ 30,000 ಸಿಂಗಾಪುರ್ ಡಾಲರ್ (ಸುಮಾರು 19 ಲಕ್ಷ ರೂಪಾಯಿ) ಪರಿಹಾರ ನೀಡಲು ಆದೇಶಿಸಿದೆ.