
ಅಂಡರ್-19 ಏಷ್ಯಾಕಪ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಭಾರತವನ್ನು ಸೋಲಿಸಿದೆ. 209 ರನ್ಗಳ ಗುರಿ ಬೆನ್ನಟ್ಟಿದ್ದ ಪಾಕಿಸ್ತಾನ ಆರಂಭಿಕ ಕುಸಿತ ಕಂಡರೂ ಹಮ್ಜಾ ಜಹೂರ್ ಅವರ ಶತಕದ ನೆರವಿನಿಂದ ಗೆಲುವು ಸಾಧಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಅರ್ಜುನ್ ರಜಪೂತ್ ಅವರ ಶತಕದ (107 ರನ್) ಬಲದಿಂದ 46.3 ಓವರ್ಗಳಲ್ಲಿ 208 ರನ್ಗಳಿಗೆ ಆಲೌಟ್ ಆಯಿತು.
61 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಪಾಕಿಸ್ತಾನಕ್ಕೆ ಹಮ್ಜಾ ಜಹೂರ್ (ಅಜೇಯ 100) ಮತ್ತು ಹಸ್ನೈನ್ ಅಬ್ಬಾಸ್ ದಾರ್ (38) ಆರನೇ ವಿಕೆಟ್ಗೆ 107 ರನ್ಗಳ ಜೊತೆಯಾಟವಾಡಿ ಚೇತರಿಕೆ ನೀಡಿದರು.