
ಶಾರ್ಜಾದಲ್ಲಿ ಹತ್ಯೆಗೀಡಾದ ಉಡುಪಿ ಮೂಲದ ಅಲ್ವಿನ್ ಪ್ರಕಾಶ್ ಕುಂದರ್ ಅವರ ದೇಹವನ್ನು ಒಂಬತ್ತು ಭಾಗಗಳಾಗಿ ತುಂಡರಿಸಿರುವ ಭೀಕರ ಘಟನೆ ಪೋಸ್ಟ್‌ಮಾರ್ಟಮ್ ವರದಿಯಲ್ಲಿ ಬೆಳಕಿಗೆ ಬಂದಿದೆ.
ಶವವನ್ನು ಎರಡು ಚೀಲಗಳಲ್ಲಿ ತುಂಬಿಸಿ ಸಾಗಿಸುತ್ತಿದ್ದ ಮಹಿಳೆ ಹಾಗೂ ಇಬ್ಬರು ಪುರುಷರ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ, ಇವರೇ ಕೊಲೆಗಾರರು ಎಂದು ಶಂಕಿಸಲಾಗಿದೆ.
ಘಟನೆ ನಂತರ ನಾಪತ್ತೆಯಾಗಿರುವ ಪ್ರಕಾಶ್ ಅವರ ಪತ್ನಿ ಹಾಗೂ ಪುತ್ರರ ಬಗ್ಗೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ, ಪತ್ನಿಯೇ ಕೊಲೆ ಮಾಡಿರಬಹುದು ಎಂಬ ಅನುಮಾನ ದಟ್ಟವಾಗಿದೆ.