
ಮುಂಬೈನಲ್ಲಿ ಡಿನ್ನರ್ ಮುಗಿಸಿ ಹೊರಬಂದ ಬಾಲಿವುಡ್ ನಟ ರಣಬೀರ್ ಕಪೂರ್, ಆಲಿಯಾ ಭಟ್ ಹಾಗೂ ವಿಕ್ಕಿ ಕೌಶಲ್ ಜೊತೆ ಪೋಸ್ ನೀಡುವಾಗ ಛಾಯಾಗ್ರಾಹಕರೊಬ್ಬರ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಫೋಟೋ ಸೆಷನ್ ಮುಗಿಸಿ ಕಾರಿನತ್ತ ಹೊರಡುವಾಗ ಪಾಪರಾಜಿಯೊಬ್ಬ ಮತ್ತೊಮ್ಮೆ ಪೋಸ್ ನೀಡುವಂತೆ ಜೋರಾಗಿ ಕೂಗಾಡಿದಾಗ, ರಣಬೀರ್ ಸಿಟ್ಟಾಗಿ 'ನೀನು ಜಾಸ್ತಿ ಮಾತನಾಡುತ್ತಿದ್ದೀಯಾ' ಎಂದು ಗರಂ ಆಗಿ ಹೇಳಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಣಬೀರ್ ಕಪೂರ್ ಅಭಿನಯದ 'ರಾಮಾಯಣ' ಹಾಗೂ 'ಲವ್ ಆ್ಯಂಡ್ ವಾರ್' ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗುತ್ತಿವೆ.