
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ 2006ರಲ್ಲಿ ಕೇರಳ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿಯಾಗಿದ್ದಾಗ ದಾಖಲಾಗಿದ್ದ ವಿಜಿಲೆನ್ಸ್ ಪ್ರಕರಣದ ಮರುತನಿಖೆಗೆ ರಾಜ್ಯ ಗೃಹ ಸಚಿವ ರಮೇಶ್ ಚೆನ್ನಿತ್ತಲ ಆದೇಶಿಸಿದ್ದಾರೆ.
ಅಂಗಮಾಲಿ-ತಿರುವನಂತಪುರಂ ಎಂಸಿ ರಸ್ತೆಯ ಗುತ್ತಿಗೆ ಬಿಲ್ ತಡೆಹಿಡಿದು ಹಣ ಪಾವತಿಗೆ ಒತ್ತಡ ಹೇರಿದ ಪರಿಣಾಮ ಮಲೇಷಿಯಾ ಕಂಪನಿ ಮುಖ್ಯ ಎಂಜಿನಿಯರ್ ಲೀ ಸೀ ಬೀನ್ ಕೌಲಾಲಂಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೂರು ಸಾಬೀತಾದ ಹಿನ್ನೆಲೆಯಲ್ಲಿ ಹಾಗೂ ಕಾನೂನು ಸಲಹೆ ಬಂದ ಬಳಿಕ ಮರುತನಿಖೆಗೆ ಆದೇಶಿಸಲಾಗಿದ್ದು, ಚುನಾವಣಾ ಆಯುಕ್ತರಿಗೆ ಯಾವುದೇ ರಕ್ಷಣೆ ಸಿಗುವುದಿಲ್ಲ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ.