
ಆಗಸ್ಟ್ 28ಕ್ಕೆ ಅಂತ್ಯಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು ನಿಧಿ 11.475 ಬಿಲಿಯನ್ ಡಾಲರ್ ಏರಿಕೆಯಾಗಿ, ಒಟ್ಟು 740.803 ಬಿಲಿಯನ್ ಡಾಲರ್ ತಲುಪಿ ಐತಿಹಾಸಿಕ ದಾಖಲೆ ನಿರ್ಮಿಸಿದೆ.
ಈ ಏರಿಕೆಯಲ್ಲಿ ವಿದೇಶೀ ಕರೆನ್ಸಿ ಆಸ್ತಿಗಳು 9.337 ಬಿಲಿಯನ್ ಡಾಲರ್ ಮತ್ತು ಚಿನ್ನದ ಸಂಗ್ರಹದ ಮೌಲ್ಯ 2.191 ಬಿಲಿಯನ್ ಡಾಲರ್ ಹೆಚ್ಚಳ ಕಂಡಿದೆ ಎಂದು ಆರ್ಬಿಐ ದತ್ತಾಂಶ ತಿಳಿಸಿದೆ.
ಜಾಗತಿಕವಾಗಿ ಭಾರತವು ಈಗ 740 ಬಿಲಿಯನ್ ಡಾಲರ್ ಮೀಸಲು ನಿಧಿಯೊಂದಿಗೆ ವಿಶ್ವದ ಐದನೇ ಅತಿದೊಡ್ಡ ಫಾರೆಕ್ಸ್ ಹೊಂದಿರುವ ದೇಶವಾಗಿ ಸ್ಥಾನ ಪಡೆದುಕೊಂಡಿದೆ.