
ಮುಂಬೈನ ದಹಿಸರ್ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನ ಬಾನೆಟ್‌ನಲ್ಲಿ 7 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿದ್ದು, ವನ್ಯಜೀವಿ ರಕ್ಷಕರು ಅದನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.
ಪಶುವೈದ್ಯರ ತಪಾಸಣೆಯ ನಂತರ ಹೆಬ್ಬಾವು ಆರೋಗ್ಯವಾಗಿರುವುದು ದೃಢಪಟ್ಟಿದ್ದು, ಅದನ್ನು ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನದ ನೈಸರ್ಗಿಕ ಆವಾಸಸ್ಥಾನಕ್ಕೆ ಬಿಡಲಾಗಿದೆ.
ಮಳೆಗಾಲದಲ್ಲಿ ಹಾವುಗಳು ಬೆಚ್ಚಗಿನ ತಾಣ ಹುಡುಕಿಕೊಂಡು ವಾಹನಗಳ ಎಂಜಿನ್ ಭಾಗಕ್ಕೆ ನುಸುಳುವುದು ಸಾಮಾನ್ಯವಾಗಿದ್ದು, ವಾಹನ ಸವಾರರು ಎಚ್ಚರಿಕೆ ವಹಿಸಲು ತಜ್ಞರು ಸೂಚಿಸಿದ್ದಾರೆ.