
ದಕ್ಷಿಣ ವಲಯ ವಿರುದ್ಧದ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿದ್ದು, ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಪೂರ್ವ ವಲಯ ಚಾಂಪಿಯನ್ ಕಿರೀಟ ಧರಿಸಿದೆ.
ಈ ಮೂಲಕ ಪೂರ್ವ ವಲಯ ತಂಡವು 13 ವರ್ಷಗಳ ಬಳಿಕ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಪಂದ್ಯದಲ್ಲಿ ಅಜೇಯ 116 ರನ್ ಬಾರಿಸಿದ ಪೂರ್ವ ವಲಯದ ಮೊಹಮ್ಮದ್ ಕೌನಿಯನ್ ಖುರೇಷಿ ಪಂದ್ಯಶ್ರೇಷ್ಠರಾದರು.