ಜರ್ಮನಿಯ ಬರ್ಲಿನ್ನಲ್ಲಿ ನಡೆದ ಪ್ರೈಡ್ ಡೇ ಉತ್ಸವದ ವೇಳೆ ವ್ಯಾನ್ ಹರಿಸಿ ಮಚ್ಚಿನಿಂದ ದಾಳಿ ನಡೆಸಿದ 21 ವರ್ಷದ ಅಬ್ದುಲ್ ಬಲ್ಲೌಟ್ ಎಂಬಾತನನ್ನು ಪೊಲೀಸರು ಎನ್ಕೌಂಟರ್ ಮಾಡಿದ್ದಾರೆ.
ಶನಿವಾರ ನಡೆದ ಈ ಭೀಕರ ದಾಳಿಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 29ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಬರ್ಲಿನ್ ಪೊಲೀಸರು ತಿಳಿಸಿದ್ದಾರೆ.
ಆರೋಪಿ ಲೆಬನಾನ್ ಮೂಲದವನಾಗಿದ್ದು, ಈತ ಇಸ್ಲಾಮಿಕ್ ಸ್ಟೇಟ್ (ISIS) ನಂಟು ಹೊಂದಿರುವ ಶಂಕೆ ಇದೆ ಎಂದು ಜರ್ಮನ್ ಆಂತರಿಕ ಸಚಿವ ಅಲೆಕ್ಸಾಂಡರ್ ಡೊಬ್ರಿಂಡ್ಟ್ ಹೇಳಿದ್ದಾರೆ.