
ಕೆನಡಾದಲ್ಲಿ ನೆಲೆಸಿರುವ 6 ವರ್ಷದ ಬಾಲಕ ಅರ್ಜುನ್ ಪ್ರಜಾಪತಿ ಇದುವರೆಗೂ ಸ್ಮಾರ್ಟ್ ಫೋನ್ ಬಳಸದೆ, ಕೇವಲ ಪುಸ್ತಕಗಳನ್ನು ಓದುತ್ತಾ ಅಪರೂಪದ ಸಾಧನೆ ಮಾಡಿದ್ದಾನೆ.
ಪೋಷಕರ ಕಟ್ಟುನಿಟ್ಟಿನ ನಿಯಮದಿಂದಾಗಿ ಸ್ಕ್ರೀನ್ ಟೈಮ್ ದೂರವಿಟ್ಟು, ಈ ಬಾಲಕ ಕೇವಲ ಆರು ವರ್ಷದೊಳಗೆ ಬರೋಬ್ಬರಿ 3000ಕ್ಕೂ ಹೆಚ್ಚು ಪುಸ್ತಕಗಳನ್ನು ಓದಿ ಮುಗಿಸಿದ್ದಾನೆ.
ಬಾಲಕನ ಅದ್ಭುತ ಬುದ್ಧಿಮತ್ತೆಯನ್ನು ಗುರುತಿಸಿರುವ ಮೆನ್ಸಾ ಹಾಗೂ ಇಂಟರ್ಟೆಲ್ ಸಂಸ್ಥೆಗಳು ತಮ್ಮ ಅಧಿಕೃತ ಸದಸ್ಯತ್ವ ನೀಡಿ ಗೌರವಿಸಿವೆ.