
ಕರ್ನಾಟಕದಲ್ಲಿ ನೈಋತ್ಯ ಮುಂಗಾರು ದುರ್ಬಲಗೊಂಡಿದ್ದು, ಸೆಪ್ಟೆಂಬರ್ 11 ಮತ್ತು 12ರಂದು ಕರಾವಳಿ ಹಾಗೂ ಒಳನಾಡಿನ ಆಯ್ದ ಜಿಲ್ಲೆಗಳಲ್ಲಿ ಮಾತ್ರ ಹಗುರ ಮಳೆಯಾಗುವ ಸಾಧ್ಯತೆಯಿದೆ.
ಕಳೆದ 24 ಗಂಟೆಗಳಲ್ಲಿ ಕಳಸದಲ್ಲಿ 3 ಸೆಂ.ಮೀ, ನೀಲ್ಕುಂದ, ಹುಬ್ಬಳ್ಳಿ, ಸಂತಹಳ್ಳಿ ತಲಾ 2 ಸೆಂ.ಮೀ ಹಾಗೂ ಬೆಳ್ತಂಗಡಿ, ಸಿದ್ದಾಪುರದಲ್ಲಿ 1 ಸೆಂ.ಮೀ ಮಳೆಯಾಗಿದೆ.
ಸೆಪ್ಟೆಂಬರ್ 12ರಂದು ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.