
ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಸಿಂಡಿಕೇಟ್ನ ಭಾಗವಾಗಿರುವ ಭಾರತೀಯ ಪ್ರಜೆ 'ಕಮಲ್' ಎಂಬಾತನನ್ನು ಅಮೆರಿಕದ ತನಿಖಾ ಸಂಸ್ಥೆ ಎಫ್ಬಿಐ ತನ್ನ ಅಧಿಕೃತ 'ಮೋಸ್ಟ್ ವಾಂಟೆಡ್' ಪಟ್ಟಿಗೆ ಸೇರಿಸಿದೆ.
ಅಮೆರಿಕದ ವಾಣಿಜ್ಯ ವಲಯದಲ್ಲಿ ಸುಲಿಗೆ ಮತ್ತು ಬೆದರಿಕೆ ಹಾಕಿದ ಆರೋಪದ ಮೇಲೆ ಕ್ಯಾಲಿಫೋರ್ನಿಯಾದ ಸೆಂಟ್ರಲ್ ಡಿಸ್ಟ್ರಿಕ್ಟ್ ಕೋರ್ಟ್ ಜುಲೈ 1, 2026 ರಂದು ಕಮಲ್ ವಿರುದ್ಧ ಫೆಡರಲ್ ಬಂಧನ ವಾರಂಟ್ ಹೊರಡಿಸಿದೆ.
ಗಡಿಯಾಚೆಗಿನ ಸುಲಿಗೆ ಜಾಲವನ್ನು ಮಟ್ಟಹಾಕಲು ಅಮೆರಿಕದ ಎಫ್ಬಿಐ ಸಂಸ್ಥೆಯು ಇಂಟರ್ಪೋಲ್ ಹಾಗೂ ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಜೊತೆಗೂಡಿ ಜಂಟಿ ಕಾರ್ಯಾಚರಣೆ ನಡೆಸುತ್ತಿದೆ.