ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ಚೆನ್ನೈ ಎಗ್ಮೋರ್ನಿಂದ ಮಂಗಳೂರು ಸೆಂಟ್ರಲ್ಗೆ ಹಾಗೂ ಮಂಗಳೂರು ಸೆಂಟ್ರಲ್ನಿಂದ ರಾಮೇಶ್ವರಂಗೆ ಏಕಮುಖ ಎಕ್ಸ್ಪ್ರೆಸ್ ವಿಶೇಷ ರೈಲುಗಳನ್ನು ಓಡಿಸಲು ದಕ್ಷಿಣ ರೈಲ್ವೆ ನಿರ್ಧರಿಸಿದೆ.
ರೈಲು ಸಂಖ್ಯೆ 06036 ಚೆನ್ನೈ ಎಗ್ಮೋರ್ – ಮಂಗಳೂರು ಸೆಂಟ್ರಲ್ ಏಕಮುಖ ಎಕ್ಸ್ಪ್ರೆಸ್ ವಿಶೇಷ ರೈಲು ಅ.18ರಂದು ಸಂಜೆ 7.45ಕ್ಕೆ ಹಾಗೂ ರೈಲು ಸಂಖ್ಯೆ 06142 ಮಂಗಳೂರು ಸೆಂಟ್ರಲ್ – ರಾಮೇಶ್ವರಂ ಎಕ್ಸ್ಪ್ರೆಸ್ ವಿಶೇಷ ರೈಲು ಅ.19ರಂದು ಬೆಳಿಗ್ಗೆ 4.15ಕ್ಕೆ ಹೊರಡಲಿದೆ.
ಈ ಎರಡೂ ವಿಶೇಷ ರೈಲುಗಳು ಪ್ರಥಮ ದರ್ಜೆ ಎ.ಸಿ, ಎ.ಸಿ ಟು ಟೈರ್, ಎ.ಸಿ ತ್ರಿ ಟೈರ್, ಸ್ಲೀಪರ್ ಕ್ಲಾಸ್ ಮತ್ತು ಸಾಮಾನ್ಯ ದರ್ಜೆ ಬೋಗಿಗಳು ಸೇರಿದಂತೆ ಒಟ್ಟು 21 ಬೋಗಿಗಳನ್ನು ಹೊಂದಿರಲಿವೆ.