
ಕಳೆದ ಜುಲೈನಲ್ಲಿ ಶೇಕಡಾ 4.45 ರಷ್ಟಿದ್ದ ಚಿಲ್ಲರೆ ಹಣದುಬ್ಬರವು ಆಗಸ್ಟ್‌ನಲ್ಲಿ ಶೇಕಡಾ 4.82 ಕ್ಕೆ ಜಿಗಿಯುವ ಮೂಲಕ ಸತತ ಮೂರನೇ ತಿಂಗಳು ಏರಿಕೆ ಹಾದಿಯಲ್ಲಿದೆ.
ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲೂ ಆಹಾರ ಧಾನ್ಯಗಳು ಹಾಗೂ ದಿನಸಿ ವಸ್ತುಗಳ ಬೆಲೆ ಹೆಚ್ಚಾಗಿರುವುದು ಈ ಹಣದುಬ್ಬರ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಆಹಾರ ಮತ್ತು ಇಂಧನ ಬೆಲೆಗಳಿಗೆ ಸೀಮಿತವಾಗಿರುವ ಈ ಏರಿಕೆಯು ಮುಂಬರುವ ಮೂರನೇ ತ್ರೈಮಾಸಿಕದಲ್ಲಿ ಗರಿಷ್ಠ ಮಟ್ಟ ತಲುಪಿ ಬಳಿಕ ತಗ್ಗುವ ಸಾಧ್ಯತೆಯಿದೆ ಎಂದು ಆರ್‌ಬಿಐ ನಿರೀಕ್ಷಿಸಿದೆ.