
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು (NWKRTC) ಪ್ರಯಾಣಿಕರ ಅನುಕೂಲಕ್ಕಾಗಿ ಹುಬ್ಬಳ್ಳಿಯ ಹೊಸೂರು ಬಸ್ ನಿಲ್ದಾಣದಲ್ಲಿ ಅತ್ಯಾಧುನಿಕ ಡಿಜಿಟಲ್ ಲಗೇಜ್ ಲಾಕರ್ ವ್ಯವಸ್ಥೆಗೆ ಚಾಲನೆ ನೀಡಿದೆ.
ಯಾವುದೇ ಸಿಬ್ಬಂದಿ ಇಲ್ಲದೆ ಎಟಿಎಂ ಮಾದರಿಯಲ್ಲಿ ಕೆಲಸ ಮಾಡುವ ಈ ಸ್ವಯಂಚಾಲಿತ ಲಾಕರ್‌ನಲ್ಲಿ ಮೊಬೈಲ್ ಒಟಿಪಿ ಬಳಸಿ ಯುಪಿಐ ಮೂಲಕ ಹಣ ಪಾವತಿಸಿ ಲಗೇಜ್ ಸುರಕ್ಷಿತವಾಗಿಡಬಹುದು.
ಈ ಡಿಜಿಟಲ್ ಲಾಕರ್ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಲಭ್ಯವಿದ್ದು, ಆರಂಭಿಕ ಶುಲ್ಕ 40 ರೂಪಾಯಿಗಳಿಂದ ಆರಂಭಗೊಂಡು 24 ಗಂಟೆಯೂ ಸಿಸಿಟಿವಿ ಕಣ್ಗಾವಲಿನಲ್ಲಿ ಇರಲಿದೆ.