
ಹಾವೇರಿ ಜಿಲ್ಲೆಯ ಬಂಕಾಪುರದಲ್ಲಿ ಸಾಲ ಮರುಪಾವತಿಸಲು ತಡವಾದ ಕಾರಣಕ್ಕೆ ಮಣಿಕಂಠ ಎಂಬವರನ್ನು ಅಪಹರಿಸಲಾಗಿದೆ.
ಆರೋಪಿಗಳು ನಾಲ್ಕು ದಿನಗಳ ಕಾಲ ಕೂಡಿಹಾಕಿ ಹಲ್ಲೆ ನಡೆಸಿ ಸಿಗರೇಟಿನಿಂದ ಸುಟ್ಟು ವಿಕೃತಿ ಮೆರೆದಿದ್ದಾರೆ.
ಸಂತ್ರಸ್ತ ಮಣಿಕಂಠ ನೀಡಿದ ದೂರಿನ ಮೇರೆಗೆ ನಾಲ್ವರ ವಿರುದ್ಧ ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.