
ಕರ್ನಾಟಕದಲ್ಲಿ ಭೀಕರ ಬರಗಾಲವಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಹರಗಿ ಗ್ರಾಮಸ್ಥರು ಮದುವೆ ನಂತರದ ಬೀಗರ ಬಾಡೂಟವನ್ನು ನಿಷೇಧಿಸಿ ನಿರ್ಧಾರ ಕೈಗೊಂಡಿದ್ದಾರೆ.
ಅದ್ದೂರಿಯಾಗಿ ಬೀಗರ ಬಾಡೂಟ ಆಯೋಜಿಸುವ ಕುಟುಂಬಕ್ಕೆ 1 ಲಕ್ಷ ರೂಪಾಯಿ ಹಾಗೂ ಅಂತಹ ಬಾಡೂಟದಲ್ಲಿ ಭಾಗವಹಿಸುವವರಿಗೆ 50 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು.
ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಸಾಲ ಮಾಡಿ ಅಥವಾ ಜಮೀನು ಮಾರಾಟ ಮಾಡಿ ಮಾಡುವ ಅದ್ದೂರಿ ವೆಚ್ಚಕ್ಕೆ ಕಡಿವಾಣ ಹಾಕಿ ಸರಳ ಜೀವನ ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ.