
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನೆಲಮಂಗಲ-ದೇವಿಹಳ್ಳಿ ಹೆದ್ದಾರಿಯ ಟೋಲ್ ದರವನ್ನು ಸೆಪ್ಟೆಂಬರ್ 1ರ ಮಧ್ಯರಾತ್ರಿಯಿಂದ 5 ರಿಂದ 10 ರೂಪಾಯಿಗಳಷ್ಟು ಹೆಚ್ಚಿಸಿದೆ.
ಕಾರು, ಜೀಪು ಮತ್ತು ವ್ಯಾನ್ಗಳ ಏಕಮುಖ ಸಂಚಾರ ದರವು 85 ರಿಂದ 90 ರೂಪಾಯಿಗೆ ಏರಿಕೆಯಾಗಿದ್ದು, ಬಸ್ ಮತ್ತು ಟ್ರಕ್ಗಳ ದರ 205 ರೂಪಾಯಿಗೆ ಹೆಚ್ಚಿಸಲಾಗಿದೆ.
ಮಲ್ಟಿ ಆಕ್ಸಲ್ ಮತ್ತು ಬೃಹತ್ ವಾಹನಗಳ ಏಕಮುಖ ಟೋಲ್ ದರವನ್ನು 330 ರೂಪಾಯಿಗೆ ಹಾಗೂ ದಿನದ ಸಂಚಾರ ದರವನ್ನು 495 ರೂಪಾಯಿಗೆ ಪರಿಷ್ಕರಿಸಲಾಗಿದೆ.