Health & Environment
ಬೆಂಗಳೂರಲ್ಲಿ ಭಾರೀ ಮಳೆ ಅವಾಂತರ: ದೊಮ್ಮಲೂರಿನಲ್ಲಿ ಗೋಡೆ ಕುಸಿದು ಜಾನುವಾರು ಸಾವು, ರಸ್ತೆಗಳು ಜಲಾವೃತ

ಬೆಂಗಳೂರಲ್ಲಿ ಭಾರೀ ಮಳೆ ಅವಾಂತರ: ದೊಮ್ಮಲೂರಿನಲ್ಲಿ ಗೋಡೆ ಕುಸಿದು ಜಾನುವಾರು ಸಾವು, ರಸ್ತೆಗಳು ಜಲಾವೃತ

tv9kannada1d
THE BRIEF
1

ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ದೊಮ್ಮಲೂರಿನಲ್ಲಿ ಆರ್ಮಿ ಕಾಂಪೌಂಡ್ ಗೋಡೆ ಕುಸಿದು ನಾಲ್ಕು ಹಸುಗಳು ಹಾಗೂ ಒಂದು ಕರು ಮೃತಪಟ್ಟು, ಮಾಲೀಕ ಗಾಯಗೊಂಡಿದ್ದಾರೆ.

2

ಕಂಠೀರವ ಸ್ಟೇಡಿಯಂ ಜಂಕ್ಷನ್ ಬಳಿ ಮರ ಬಿದ್ದು ಸಿದ್ದಲಿಂಗಯ್ಯ ಜಂಕ್ಷನ್‌ ಕಡೆಗೆ ಸಂಚಾರಕ್ಕೆ ಅಡಚಣೆಯಾಗಿದ್ದು, ಮಲ್ಲತ್ತಹಳ್ಳಿಯಲ್ಲಿ ಮರ ಬಿದ್ದು ಆಟೋ ಜಖಂಗೊಂಡಿದೆ.

3

ಕೋರಮಂಗಲ, ಬಾಗಲಗುಂಟೆ ಸೇರಿದಂತೆ ವಿವಿಧ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದ್ದು, ಪ್ರಮುಖ ರಸ್ತೆಗಳಲ್ಲಿ ಮಳೆ ನೀರು ನಿಂತು ವಾಹನ ಸವಾರರು ಪರದಾಡಿದ್ದಾರೆ.