ಗೃಹ ಜ್ಯೋತಿ ಯೋಜನೆ ಫಲಾನುಭವಿಗಳಿಗೆ ಜುಲೈ ತಿಂಗಳ ಸರಾಸರಿ ವಿದ್ಯುತ್ ಬಿಲ್ ನೀಡಲಾಗಿದ್ದು, ಗ್ರಾಹಕರು ಬಿಲ್ ಸ್ವೀಕರಿಸಿದ 15 ದಿನಗಳ ಒಳಗೆ ಪಾವತಿಸಲು ಬೆಸ್ಕಾಂ ಸೂಚಿಸಿದೆ.
ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆ, ಇಮೇಲ್ ಅಥವಾ ಫೋನ್ ಪೇ, ಗೂಗಲ್ ಪೇ ಮುಂತಾದ ಆಪ್‌ಗಳ ಮೂಲಕ ಬಿಲ್ ಮೊತ್ತವನ್ನು ಪರಿಶೀಲಿಸಿ ಪಾವತಿಸಬಹುದಾಗಿದೆ.
ಎಚ್‌ಟಿ ಗ್ರಾಹಕರು, 40 ಎಚ್‌ಪಿಗಿಂತ ಹೆಚ್ಚಿನ ಲೋಡ್ ಹೊಂದಿರುವವರು ಮತ್ತು ಸೋಲಾರ್ ರೂಫ್‌ಟಾಪ್ ಗ್ರಾಹಕರಿಗೆ ಮಾತ್ರ ನೈಜ ಮೀಟರ್ ರೀಡಿಂಗ್ ಆಧಾರದ ಮೇಲೆ ಬಿಲ್ ನೀಡಲಾಗುವುದು ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.