
ಗುಜರಾತ್ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ದೆಹಲಿ ತಂಡದ ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ 220 ಎಸೆತಗಳಲ್ಲಿ 24 ಬೌಂಡರಿ ಹಾಗೂ 6 ಸಿಕ್ಸರ್ಗಳೊಂದಿಗೆ 199 ರನ್ ಗಳಿಸಿದರು.
ದ್ವಿಶತಕಕ್ಕೆ ಕೇವಲ ಒಂದು ರನ್ ಬೇಕಿದ್ದಾಗ ಪ್ರಿಯಾಂಶ್ ವಿಕೆಟ್ ಒಪ್ಪಿಸಿ ದ್ವಿಶತಕದಿಂದ ವಂಚಿತರಾದರು.
ನಾಯಕ ಆಯುಷ್ ಬದೋನಿ (115 ರನ್) ಅವರೊಂದಿಗೆ ಪ್ರಿಯಾಂಶ್ 234 ರನ್ಗಳ ಜೊತೆಯಾಟವಾಡಿದ್ದು, ಮೊದಲ ದಿನದಾಟದ ಅಂತ್ಯಕ್ಕೆ ದೆಹಲಿ 4 ವಿಕೆಟ್ಗೆ 381 ರನ್ ಗಳಿಸಿದೆ.