
ಆಗಸ್ಟ್ 2026ರಲ್ಲಿ ಬೆಂಗಳೂರಿನಲ್ಲಿ ನೋಂದಣಿಯಾದ ಒಟ್ಟು 76,508 ಹೊಸ ವಾಹನಗಳ ಪೈಕಿ 13,389 ಎಲೆಕ್ಟ್ರಿಕ್ ವಾಹನಗಳಾಗಿದ್ದು, ಪ್ರತಿದಿನ ಸರಾಸರಿ 430 ಇವಿ ವಾಹನಗಳು ರಸ್ತೆಗಿಳಿದಿವೆ.
ಕರ್ನಾಟಕದ ಒಟ್ಟು ಇವಿ ನೋಂದಣಿಗಳ ಪೈಕಿ ಬೆಂಗಳೂರು ನಗರವೊಂದೇ ಶೇ. 50.3ರಷ್ಟು ಪಾಲನ್ನು ಹೊಂದಿದೆ ಎಂದು ಸಾರಿಗೆ ಇಲಾಖೆಯ ಅಂಕಿಅಂಶಗಳು ತಿಳಿಸಿವೆ.
ಬೆಂಗಳೂರಿನಲ್ಲಿ ಆಗಸ್ಟ್ ಅಂತ್ಯದ ವೇಳೆಗೆ 4.9 ಲಕ್ಷಕ್ಕೂ ಹೆಚ್ಚು ನೋಂದಾಯಿತ ಎಲೆಕ್ಟ್ರಿಕ್ ವಾಹನಗಳಿದ್ದು, ಅದರಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ.